ದಿನಕರನ ದೀನ ಕರು

ಕರಗಿತು ಕರುಳಿನ ಕರೆ

ಸಪ್ತಸ್ವರಗಳ ಸ್ಪರ್ಶ

ಸ್ಪಟಿಕ ಸ್ಪಂದನ ಸೆರೆ


ರಾಗಮಾಲಿಕೆಯ ಸ್ವರ ನರ್ತನ

ಬೆರಳಚ್ಚಿನ ಒಲವ ಚುಂಬನ

ಬೀಜಾಂಕದ ರೇಖೆಯ ಗಣಿ

ಮಸ್ತಕದಿ ಅಂಕಿಯ ಸರಣಿ


ಮಲ್ಲಿಗೆ ಮನದ ಮಡದಿ

ತುಟಿ ಅಂಚಿನಲಿ ಮಧುಪರ್ಕದ ಸವಿ

ಪ್ರೇಮ ಪಾಕ ಉಣಬಡಿಸಿದಾಕೆ, ನನ್ನಾಕೆ

ಶಾಮಲೆಯ ಶಾರದೆ ಸ್ವರೂಪ.