ಮನಸೊಂದು ಮಾಯಬಜಾರು !
ಅವನಂತೆ ಕುಣಿಯೋರು ನಾವು !
ನೀರುಣಿದ ಕಾಳ ಮೊಳಕೆ ಚಿಗುರಿ ಘಮ್ಮೆಂದು
ಹಗುರಾದ ಕಣದ ಬಿಂದು ರಾಡಿ ಹಿಡಿದು
ಜಟಿಲ ಕಣಗಳು ಪುಟಿ ಪುಟಿದು ರಾಶಿಗೊಂಡು
ತಿಳಿಯಾದ ಮುಗಿಲ ನೀಲಿ ಕಣ್ಣಿಗೆ ಗೋಚರ
ಸತ್ಯ ಮಿಥ್ಯವೋ..? ಪರಮಾತ್ಮನ ಆಟವೋ..?
ದುಃಖ ದುಮ್ಮಾನಗಳನಳಿದು ಮೂಕನಾದ ಕಡಲ ಮೌನವೋ...?
ಕಾದ ಬೆಳ್ಳನೆ ನೊರೆ ಹಾಲು ಹೊಡೆದು ಕೆಟ್ಟಿತು
ತೆಗೆದಿಟ್ಟ ಚಿಟಿಕೆ ಹೆಪ್ಪು ಮೊಸರಾಯಿತು
ಬದುಕ ಗುಟ್ಟನರಿದ ತುಪ್ಪ ಮಜ್ಜಿಗೆಯೊಳಡಗಿತ್ತು !
ತೆಗೆದಿಟ್ಟ ಚಿಟಿಕೆ ಹೆಪ್ಪಿನ ಹಾಲಲ್ಲಡಗಿತ್ತು !
ಸತ್ಯ ಮಿಥ್ಯವೋ.. ? ಪರಮಾತ್ಮನ ಆಟವೋ..?
ತನ್ನಳೊಡಗಿರುವ ಮಂದತೆ ಬೆಂದು
ಮುಗಿಲಾಚೆಗೆ ಸುರಿವ ಬೆಳ್ಳಿ ತಾರೆಯೋ...?
