ಓ ಕೊಂಚ ತಡಿಯೇ ಮಳೆಬಿಲ್ಲೇ ನನ್ನವಳು ಕಾದಿಹಳು
ಇನಿಯನ ನೋಡಲು ಕೊರೆಯುವ ಚಳಿಯಲ್ಲಿ ನಡುಗಿ ನಿಂದಿಹಳು

ಏ ಮುದ್ದು ರವಿಯೇ ಸವಿಯ ನಿದಿರೆ ಸಾಕು
ಮೂಡಣದಿ ಸೂರ್ಯ ನೀ ಏಳೋ ಒಡೆಯ
ನಡೆದು ಸಂಗಮಿಸೋ ಬಾನಲ್ಲಿ ಕಾದಿರು ಚಿರಕಾಲ

ಓ ಕಗ್ಗತ್ತಲ ಚಂದಿರಾ ಮಂಕಾದ ಬೆಳಕು ಅವಳ ಕನಸುಗಳ
ಹಾದಿಯಲ್ಲಿ ಮಳೆಗೆ ತಂದ ಮೋಡ ಬಿಡಿಸಿ ಹಾಕು
ಅವಳ ಕಣ್ಮಣಿ ಹೊಳೆಯಲಿ ಈ ಬಾನಲ್ಲಿ
ಓ ಕನ್ನಡಿ ನೀರೇ ಅವಳ ಮುಖವನು ತೋರು ನನ್ನ ನೆನಪಿನಲಿ

ಜಗ ಬೆಳಗೋ ರವಿ ನಿನಗೆ ಸಾವಿರ ನಮನಗಳು
ಜಿಟಿ ಜಿಟಿ ಮಳೆ ಹನಿ ತುಸು ದೂರ ಸರಿದಳು
ಮಂಜಿನ ಹನಿ ನಡೆಯುವ ಹಾದಿಗೆ ಹಸಿರನು ಹಾಸಿದೆ
ಅರಳಿದ ಮಂದಾರ ಪ್ರೇಮೋದಯ ಹಾಡಿದೆ

✍️✍️ Ranjitha GS