ಕರೆಯಿತು ಯಾವುದೋ ಒಂದು ಮಾಯೆ
ಕಣ್ಣು ತೆರೆದು ನೋಡುವಲ್ಲಿ ಮರೆಯಾಯಿತು !
ಅದವುದೋ ಶಕ್ತಿ ಯಾರಾದರೂ ಬಲ್ಲಿರಾ...?
ತನ್ನಂತೆ ಇರಲು ಬಯಸಿಹೆ ; ಸಾಗರದ ಅಲೆಗು ಭೀತಿಯೇ !
ಅದಾವುದೋ ಶಕ್ತಿ ಎನ್ನ ತಡೆಯಿತು ..?
ಉತ್ತರವಿಲ್ಲದ ಪ್ರಶ್ನೆ ಇಂದು ಎನ್ನ ಕಾಡಿತು...?
ಮಲಗಿರುವ ಗುಬ್ಬಿ ಗೂಡೋಳಗೆ
ಅಲೆಯುವ ಬೀತಿ ಮನದೊಳಗೆ
ಎಲ್ಲಿಂದ ಬಂತು ಆ ಸಿಡಿಲು ತಿಳಿಯಾದ ಮುಗಿಲೊಳಗೆ..?
ತನ್ನಂತೆ ತಾ ಇರಲು ಮುಗಿಲಿನ ಇರುಳು !
ಸುಮ್ಮನೇ ಬಿಡದೂ ಬಿರುಗಾಳಿ ತಿರುಳು !
