ಜೈ ! ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ || ಜೈ! ಸುಂದರ ನದಿ ವನಗಳ ನಾಡೆ ಜಯಹೇ ರಸ ಋಷಿಗಳ ಬೀಡೆ, ಭೂದೇವಿಯ ಮಕುಟದ ನವಮಣಿಯೇ, ಗಂಧದ ಚಂದದ ಹೊನ್ನಿನ ಗಣಿಯೇ, ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ. ಜನನಿ ಜೋಗುಳದ ವೇದದ ಘೋಷ ಜನನಿಗೆ ಜೀವವು ನಿನ್ನಾವೇಶ ಹಸುರಿನ ಗಿರಿಗಳಸಾಲೆ ನಿನ್ನಯ ಕೊರಳಿನ ಮಾಲೆ ಕಪಿಲ ಪತಂಜಸ ಗೌತಮ ಜಿನನುತ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ. ಶಂಕರ ರಾಮಾನುಜ ವಿದ್ಯಾರಣ್ಯ ಬಸವೇಶ್ವರ ಮಾಧ್ವರ ದಿವ್ಯಾರಣ್ಯ ರನ್ನ ಷಡಕ್ಷರಿ ಪೊನ್ನ ಪಂಪ ಲಕುಪತಿ ಜನ್ನ ಕಬ್ಬಿಗ ನುಡಿಸಿದ ಮಂಗಳಧಾಮ ಕವಿ ಕೋಗಿಲೆಗಳ ಪುಣ್ಯಾರಾಮ ನಾನಕರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ. ತೈಲಪ ಹೊಯ್ಸಲರಾಳಿದ ನಾಡೆ ಡಂಕಣ ಜಕಣರ ನೆಚ್ಚಿನ ಬೀಡೆ ಕೃಷ್ಣ ಶರಾವತಿ ತುಂಗಾ ಕಾವೇರಿಯ ವರರಂಗ ಚೈತನ್ಯ ಪರಮಹಂಸ ವೀವೆಕರ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ. ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಣಗಳ ಸೆಳೆಯುವ ನೋಟ ಹಿಂದೂ ಚ್ರಸ್ತ ಮುಸಲ್ಮಾನ ಪಾರಸಿಕ ಜೈನರ ಉದ್ಯಾನ ಜನಕನ ಹೋಲುವ ದೊರೆಗಳ ಧಾಮ  ಗಾಯಕ ವೈಣಿಕರಾ ಧಾಮ  ಕನ್ನಡ ನುಡಿ ಕುಣಿದಾಡುತ ಗೇಹ ಕನ್ನಡ ತಾಯಿಯ ಮಕ್ಕಳ ದೇಹ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ.