Kavishala
Contests
Plus
Log in / Sign up
Home
Profile
Home
Profile
1 min read
781.9K reads
ಭಾರತ ತಪಸ್ವಿನಿ - ಕುವೆಂಪು
Kavishala Archives
Jun 16, 2020
Share as image
Download
ನಾಡಿನ ಪುಣ್ಯದ ಪೂರ್ವ ದಿಗಂತದಿ ನವ ಅರುಣೋದಯ ಹೊಮ್ಮುತಿದೆ ! ಚಿರನೂತನ ಚೇತನಾಡುತ್ಸಾಹದಿ ನವೀನ ಜೀವನ ಚಿಮ್ಮುತಿದೆ ! ಅಭಿನವ ಮಧುಕೋಕಿಲ ಕಲಾಕಂಠದಿ ಸ್ವರಸುರ ಚಾಪಗಳುಣ್ಮುತಿವೆ ! ಶ್ಯಾಮಲ ಕಾನನ ಸುಮ ಸಮ್ಮೇಳದಿ ಇಂಚರ ಸಾಸಿರ ಪೊಣ್ಮುತಿವೆ! ಕಿವಿ ಕಣ್ಣಾಗುತಿದೆ ! ಕಾಣೆ ಕಿವಿಯಾಗುತಿದೆ ! ಭೂಮವ್ಯೋಮದ ನೀಲಾಂಗಣದಲಿ ಕೆಂದರೆಮುಗಿಲಿನ ರಂಗೋಲಿ ರಂಜಿಸುತಿದೆ ಹೊಳೆ ತೆರೆದುಚ್ಚಿತ್ತಿದ ಕೆಂಪಗೆ ನುನ್ಮಳಲನು ಹೋಳಿ ! ಹಿಮಾಮಣಿ ಸಿಂಚಿತ ತೃಣವಿಸ್ತಾರಡಿ ನೇಸರು ಕೀಡಿಬಳನೆಯ್ಯುತಿದೆ ವಿಹಂಗ ದಂಪತಿ ತರುಶಾಖಾಗ್ರದಿ ಪ್ರೇಮಾಲಾಪಾನೆಗೈಯುತಿದೆ ನವೀನಗಾನವ ಕೇಳಿ, ನಾಡಿನ ಪುಣ್ಯದ ಪೂರ್ವದಿಗಂತದಿ ನವೀನ ಜೀವನ ಚಿಮ್ಮುತಿದೆ !
Join WhatsApp Community
Daily literature, poetry & stories
Read more
Earn more
Learn more
Write