ಯಾವಾಗಲಾದರೂ ಬೇಕಾಗ ಬಹುದು


ಯಾವಾಗಲಾದರೂ ಬೇಕಾಗುತ್ತೆ

ಇದು ನಮ್ಮ ಒಂದು ಸಾಮಾನ್ಯ ಅನಿಸಿಕೆ


ತರಕಾರಿ ತೊಗೊಂಡರೆ ಪ್ಲಾಸ್ಟಿಕ್ ಬ್ಯಾಗ್ ಗಳು

ಅಂಗಡಿ ವ್ಯಾಪಾರ ಮಾಡಿದರೆ ಕವರ್ ಗಳು


ಅಕ್ಕಿ ಜೊತೆ ಬರುವ ಜೂಟ್ ಬ್ಯಾಗ್ ಗಳು

ತಿಂಡಿಗಳ ಜೊತೆ ಬರುವ ಜಿಪ್ಲಾಕ್ ಕವರ್ ಗಳು


ಊಟ ತಿಂಡಿ ಆರ್ಡರ್ ಮಾಡಿದರೆ ಡಬ್ಬಗಳು

ಮದುವೆಗೆ ಹೋದರೆ ತಾಂಬೂಲದ ಚೀಲಗಳು


ಉಡುಗರೆಯ ಹರಿಯದ ರಾಪರ್ ಗಳು

ಕಾಣಿಕೆಯಾಗಿ ಹಣ ಕೊಟ್ಟ ಕವರ್ ಗಳು


ಕುರ್ತ ಸೆಟ್ ಗಳ ಟ್ರಾನ್ಸ್ಪರೆಂಟ್ ಕವರ್ ಗಳು

ಸೀರ ಗಳ ಕಾರ್ಡಬೋರ್ಡ್ ಬಾಕ್ಸ್ ಗಳು


ಶರ್ಟ್ ಬನಿಯನ್ನಿನ ಒಳ್ಳೆಯ ಕವರ್ ಗಳು

ಜೀನ್ಸ್ ಪ್ಯಾಂಟಿನ ಪೇಪರ್ ಕವರ್ ಗಳು


ಓದಿ ಇಟ್ಟಿರುವ ನ್ಯೂಸ್ ಪೇಪರ್ ಗಳು

ಅದರ ಜೊತೆ ಬರುವ ಪಾಮ್ ಪ್ಲೆಟ್ ಗಳು


ದೊಡ್ಡ ಸಾಮಾನ್ ಪ್ಯಾಕಿಂಗ್ ನ ಪ್ಲಾಸ್ಟಿಕ್ ಶೀಟ್ ಗಳು

ಅದರ ಜೊತೆ ಬರುವ ಬಬ್ಬಲ್ ರಾಪ್ ಗಳು


ಇವುಗಳೆಲ್ಲ ಮನೆಯಲ್ಲಿ ಸೇರಿಕೊಳ್ಳುತ್ತದೆ

ಒಮ್ಮೆಯಾದರೂ ಬಳಸಲು ಸಿಗುತ್ತದೆ


ಜೋಕೆ! ಇವೆಲ್ಲ ಕಸ ಎಂದು ಬಿಸಾಕುವಿರಾ

ಹಣ ಉಳಿಸುವ ಪ್ರಯತ್ನ ವೆನುವೀರಾ?


- ಗೋಪಿನಾಥ್ S


(ChatGPT ಬೆಂಬಲವಿಲ್ಲದೆ ಬರೆಯಲ್ಪಟ್ಟಿದೆ)