ಶ್ರೀ ರಾಮ


ನಿನ್ನದೇ ನೆನಪು ಮನದಲಿ ಶ್ರೀ ರಾಮ

ನಿತ್ಯವೂ ನಿನ್ನನೇ ಆರಾಧಿಸುವೆ ಓ ರಾಮ

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


ಎಂದು ನೀ ಬಂದು ನಮ್ಮನು ಕಾಪಾಡುವೆ

ನಿನ್ನ ಬರುವನ್ನೇ ಎದುರು ನೋಡುತಿಹುವೆ

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


ನೀನು ಹೆಣ್ಣಿಗೆ ಮಹತ್ವ ಕೊಟ್ಟ ಹಾಗೆ

ಈ ಕಲಿ ಯುಗದಲಿ ನಡೆಯುತಿಲ್ಲ ಯಾಕೆ

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


ನಿನ್ನ ತಂದೆಯ ಮಾತಿಗೆ ಎಷ್ಟು ಗೌರವ ಕೊಟ್ಟೆ

ಈಗ ತಂದೆಯನ್ನೇ ಹೊರಗೆ ತಳ್ಳು ಹಾಕುವರೇ

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


ನಿನ್ನ ಸಹೋದರರಿಗೆ ಎಷ್ಟು ಪ್ರೀತಿ ತೋರಿಸಿದೆ

ಈಗ ಸಹೋದರನನ್ನೇ ಕೊಂದು ಹಾಕುವರೇ

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


ನೀನು ಸಮಾಜಕ್ಕಾಗಿ ಪತ್ನಿಯನ್ನೇ ದೂರ ಮಾಡಿದೆ

ಈಗ ಸಮಾಜಕ್ಕಾಗಿ ಯಾರು ಏನು ಮಾಡಲಿರುವರು

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


ನೀನು ತಿಳಿಯದೆ ಮಕ್ಕಳನ್ನು ಎಷ್ಟು ದಿನ ಬಿಟ್ಟು ಬಾಳಿದೆ

ಈಗ ಮಕ್ಕಳು ದೊಡ್ಡವರಾದ ಕೂಡಲೇ ಮನೆ ಬಿಟ್ಟು ಹೋಗುವರೆ

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


ಈ ನಮ್ಮ ಭಾರತದಲ್ಲಿ ರಾಮರಾಜ್ಯ ಬರಲು ಸಾಧ್ಯವೇ

ನಮ್ಮ ಜನಾಂಗ ಇದರ ಮಹತ್ವವನ್ನು ಅರಿತಿರುವರೆ

ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತ ರಾಮ


- ಗೋಪಿನಾಥ್ S


(ChatGPT ಬೆಂಬಲ ವಿಲ್ಲದೆ ಬರೆಯಲ್ಪಟ್ಟಿದೆ)