ನೂರೊಂದು ನೆನಪು
ನೂರೊಂದು ನೆನಪು ಎದೆಯಾಳದಿಂದ
ಬರುತಿಹುದು ದಿನ ನಿತ್ಯ ಆಕಾಶದಿಂದ.
ಮೈಸೂರಿನ ರಸ್ತೆಗಳು ನಡೆಯಲು ಆರಾಮ
ಕಾರು ಸ್ಕೂಟರು ಕಾಣಲು ಅಪರೂಪ.
ಮನೆಗೆ ಹತ್ತಿರವೇ ಶಾಲೆ ಕಾಲೇಜು
ಏನು ತೊಂದರೆ ಇರಲಿಲ್ಲ ಹೋಗಿ ಬರಲು.
ಸ್ನೇಹಿತರೊಂದಿಗೆ ಆಟವಾಡುವೆವು
ಮಾತುಕತೆ ಆಡಿ ಸಮಯ ಕಳೆಯುವೆವು.
ಸಯ್ಯಾಜಿ ರಾವ್ ರಸ್ತೆಯಲ್ಲಿ ಕಾಣಿಸುತ್ತೆ ಜನಸಮೂಹ
ಅಲ್ಲಿನ ದೊಡ್ಡ ಮಾರುಕಟ್ಟೆ ತರಕಾರಿ ಹಣ್ಣು ಹೂವಿಗೆ ಪ್ರಸಿದ್ಧ.
ಅರಮನೆಯ ಭವ್ಯವಾದ ಕಟ್ಟಡ ಶೈಲಿ
ನೋಡಲು ಕಣ್ಣು ಸಾಲದು ಅದರ ಘನಿ.
ಒಳಗೆ ಚಿತ್ರ ಕಲೆ ಆಭರಣಗಳು ಚಿನ್ನದ ಆಸನ
ಸುತ್ತಮುತ್ತ ದೊಡ್ಡ ಮತ್ತು ಚಿಕ್ಕ ಗಡಿಯಾರ.
ಲಕ್ಷಾಂತರ ವಿದ್ಯುತ್ ದೀಪಗಳೂ ಮಿನುಗುತ್ತೆ ಅರಮನೆ ಸುತ್ತ
ಅದಲ್ಲದೆ ಜಂಬೂ ಸವಾರಿ ಮಾರ್ಗ ನೋಡಲು ವೈಭವಯುಕ್ತ.
ಕುದರೆ ಟಾಂಗಾ ಗಾಡಿ ವೈಶಿಷ್ಟ್ಯ ಮೈಸೂರಿನದು
ಅರಮನೆ ಉತ್ತರ ದ್ವಾರದ ಬಳಿ ಸಿಗುವುದು.
ಅಪೂರ್ವ ವೃತ್ತಗಳು ರಾಜರ ಅಮೃತಶಿಲೆ ಪ್ರತಿಮೆಗಳು
ಪುರಾತನ ಕಲ ವಸ್ತು ಸಂಗ್ರಹಾಲಯ ಮೃಗಾಲಯಗಳು.
ವಿಶ್ವವಿಖ್ಯಾತ ಕನ್ನಂಬಾಡಿ ಉದ್ಯಾನ ಅಣೆಕಟ್ಟು
ಚಾಮುಂಡಿ ಬೆಟ್ಟದ ದೇವಸ್ಥಾನ ಮತ್ತಷ್ಟು.
ಲಕ್ಷ್ಮಿ ಪ್ರಭ ರಾಜಕಮಲ್ ಥಿಯೇಟರ್ ಗಳಲ್ಲಿ ಕನ್ನಡ ಸಿನಿಮಾ
ಒಲಂಪಿಯಾ ವುಡ್ಲಾಂಡ್ಸ್ ಇತರೆ ಸ್ಕ್ರೀನ್ ನಲ್ಲಿ ಹಿಂದಿ ಸಿನಿಮಾ
ಗಣೇಶ ಗಾಯತ್ರಿ ಯಲ್ಲಿ ನೋಡಿ ಆನಂದಿಸಿದೆವು
ಇಂಗ್ಲಿಷ್ ಸಿನಿಮಾ.
ಗಂಧ ಬೀಟೆ ಮರದ ಕಲಾಕೃತಿ ಗಂಧದ ಎಣ್ಣೆ ಸಿಲ್ಕ