ನಮ್ಮ ಊರು ಬೆಂಗಳೂರು

ನಮ್ಮ ಊರು ಬೆಂಗಳೂರು

ಕೆಂಪೇಗೌಡರು ಬೆಳೆಸಿದ ಊರು.

ಪೇಟೆ ಇಂದ ಪ್ರಾರಂಭಿಸಿದೆ

ಈಗ ದೊಡ್ಡ ಪಟ್ಟಣವಾಗಿದೆ.

ಬೆಂದ ಕಾಳು ಕಡಲೆ ಕಾಯಿ ಬೆಳದ ಊರು

ಈಗ ಎಲ್ಲ ತರಹದ ಪದಾರ್ಥ ಸಿಗುವ ಊರು.

ಬರಿ ಪಿಂಚಣಿದಾರರಿಗೆ ಸ್ವರ್ಗ ವಾದ ಊರು

ಈಗ ಎಲ್ಲರಿಗೂ ಮೆಚ್ಚಿಗೆಯಾದಂತ ಊರು.

ಒಂದೂವರೆ ಕೋಟಿ ಜನಸಂಖ್ಯೆಯ ಊರು

ಅಷ್ಟೇ ವಾಹನಗಳು ಇರುವ ಊರು.

ಹೊರಗೆ ಬಂದರೆ ಜನಸಮೂಹ

ಜೊತೆಗೆ ವಾಹನಗಳ ಸಂಚಾರ.

ಇದಲ್ಲದೆ ಬೀದಿಯಲ್ಲಿ ಹಸು ಕರುಗಳು

ಮತ್ತು ಬೆದರಿಕೆಗೆ ನಾಯಿಗಳ ಹಿಂಡು.

ಏಲ್ಲಿ ನೋಡಿದರಲ್ಲಿ ಕಸದ ರಾಶಿಗಳಲ್ಲ

ಜನರು ಕಸದವನಿಗೆ ಕೊಡಲು ಸಮಯವಿಲ್ಲ.

ರಸ್ತೆಯಲ್ಲಿ ಸಣ್ಣ ದೊಡ್ಡ ಗುಂಡಿಗಳು ಬಂದಿಹವು

ಒಂದು ಮೈಲಿಯಲ್ಲಿ ಐದು ಮಾತ್ರ ಎಂದು ಹೇಳಿರುವರು.

ವಾಹನಗಳು ಹೆಚ್ಚು ಮಾತ್ರದಲ್ಲಿ ರಸ್ತೆಯಲ್ಲಾ

ಹೊರಗೆ ಹೋಗಲು ಬೇರೆ ದಾರಿಯಿಲ್ಲ.

ಟ್ರಾಫಿಕ್ ಜಾಮ್ ಗಳು ಒನ್ ವೇಗಳು ಬಹುತೇಕ ವಾಗಿದೆ

ಅರ್ಧ ಗಂಟೆಯ ಮಾರ್ಗ ಒಂದು ಗಂಟೆಯ ವರೆಗೂ ಹೆಚ್ಚಾಗಿದೆ.

ಆಕ್ಸಿಡೆಂಟ್ ಗಳು ಅಧಿಕ ಮಾತ್ರದಲ್ಲಿ ಇವೆ

ರಸ್ತೆಯಲ್ಲಿ ಜನರ ಸಾವು ಹೆಚ್ಚಾಗುತ್ತಲೇ ಇದೆ.

ಮೆಟ್ರೋ ಸ್ಟೇಷನ್ ಬಸ್ ಸ್ಟಾಪ್ ಗಳು ಇದ್ದರೂ

ನಡೆದು ಹೋಗಲಾರದಷ್ಟು ದೂರವಿರುವುದು.

ನಡೆದು ಹೋಗಲು ಫುಟ್ ಪಾತ್ ಆದರೂ ಬೇಕಲ್ಲ

ಅಲ್ಲಿ ಕಸ ಒಡೆದ ಕಲ್ಲು ಬಿಕರಿಗಾರರಿಂದ ತುಂಬಿದೆಯಲ್ಲ.

ನಮ್ಮ ಜನಗಳೂ ಹೇಳಿದ ಮಾತು ಕೇಳುವುದಿಲ್ಲ

ಬೇಡವೆಂದರೂ ರಸ್ತೆ ಹೊಲಸು ಮಾಡುತ್ತಾರಲ್ಲ.

ಬಹಳ ರಸ್ತೆಗಳಲ್ಲಿ ನಿರ್ಮಾಣಗಳು ದುರಸ್ತಿ ಗಳು ನಡೆಯುತ್ತಲೇ ಇವೆ

ಅರ್ಧ ರಸ್ತೆಯಲ್ಲಿ ವಾಹನಗಳು ಚಲಿಸ ಬೇಕಾಗಿವೆ.

ಸರ್ಕಾರ ನಿಯಂತ್ರಣದಲ್ಲಿ ಇರುವಷ್ಟು ಮಾಡಲು ಇರುವರು

ಐದು ಪ್ರಮುಖ ಯೋಜನೆಗಳನ್ನು ನಡೆಸಿ ಬರಲಿರುವರು.

ಸರ್ಕಾರದ ಜೊತೆ ನಾಗರಿಕರು ನಡೆದು ಕೊಳ್ಳ ಬೇಕು

ಬೆಂಗಳೂರನ್ನು ಸ್ವಚ್ಛತೆ ಇಂದ ಇರಲು ಸಹಕರಿಸ ಬೇಕು.

- ಗೋಪಿನಾಥ್ S