ಕೃಷ್ಣಂ ವಂದೇ ಜಗದ್ಗುರು
ಶ್ರೀರಾಮ ತೆರೆದಂತೆ ತೇತ್ರಯುಗ ಮುಗಿಯಿತು
ನಂತರ ದ್ವಾಪರ ಯುಗ ಪ್ರಾರಂಭವಾಯಿತು
ಸತ್ಯವತಿ ಜೀವನದ ಕಥೆ ಆರಂಭ
ವ್ಯಾಸ ಭೀಷ್ಮರ ಜನ್ಮದ ಅನುಬಂಧ
ಧೃತರಾಷ್ಟ್ರ ಪಾಂಡು ಅವರ ಆಗಮನ
ಕುಂತಿ ಮಾದರಿ ಪಾಂಡು ಮತ್ತು
ಧೃತರಾಷ್ಟ್ರ ಗಾಂಧಾರಿಯರ ವಿವಾಹ
ಐದು ಪಾಂಡವ ನೂರೆರಡು ಕೌರವರ ಜನ್ಮ.
ಮಥುರಾದ ರಾಜ ಕಂಸ ಬಲಶಾಲಿ ಆದ
ಅವನ ದೌರ್ಜನ್ಯ ಕ್ರೌರ್ಯ ಆಳ್ವಿಕೆ ತಾಳಲಾರದೆ
ಜನರು ದೇವರಲ್ಲಿ ಬೇಡಿ ಕೊಂಡರು.
ಕಂಸನ ತಂಗಿ ದೇವಕಿ ವಸುದೇವರ ವಿವಾಹ
ಅವರ ೮ನೇ ಮಗು ಕಂಸನ ಸಾವಿಗೆ ಕಾರಣ ಎಂದಿತು ಆಕಾಶವಾಣಿ
ದೇವಕಿ ವಸುದೇವರನ್ನು ಕಾರಾಗೃಹದಲ್ಲಿ ಇಟ್ಟನು
ಅವರ ಆರು ಮಕ್ಕಳನ್ನು ಕೊಂದು ಹಾಕಿದನು.
ಏಳನೇ ಮಗುವಿನ ಭ್ರೂಣ ರೋಹಿಣಿ ಹೊಟ್ಟೆಗೆ ವರ್ಗಾಯಿಸಲಾಯಿತು
ದೇವಕಿಗೆ ಏಳನೇ ಮಗು ಹುಟ್ಟಲಿಲ್ಲವೆಂಬ ಭರವಸೆ
ರೋಹಿಣಿ ಬಲರಾಮನಿಗೆ ತಾಯಾದಳು
ದೇವಕಿ ವಿಷ್ಣು ಅವತಾರ ಏಳನೇ ಮಗುವಾಗಿ ಪಡೆದಳು.
ಕೃಷ್ಣ ಪಕ್ಷ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರ ಮಧ್ಯ ರಾತ್ರಿ ಜನ್ಮ ವಾಯಿತು
ತಕ್ಷಣವೇ ವಿಷ್ಣುವು ತನ್ನ ನಿಜ ರೂಪ ತೋರಿಸಿದನು
ತನ್ನನ್ನು ಯಮುನಾ ದಾಟಿ ಗೋಕುಲಕ್ಕೆ ಕರೆದೊಯ್ಯುವುದಾಗಿ ಆಜ್ಞೆ ಇಟ್ಟನು
ವಸುದೇವ ಚಿಕ್ಕ ಮಗುವನ್ನು ಒಂದು ಬುಟ್ಟಿಯಲ್ಲಿ ಇಟ್ಟು ಕರೆದೊಯ್ದನು.
ಯಶೋದೆಗೆ ಹುಟ್ಟಿರುವ ಹೆಣ್ಣು ಮಗುವನ್ನು ತಂದು ದೇವಕಿ ಮಡಿಲಲ್ಲಿ ಬಿಟ್ಟನು
ಕಂಸ ಅದನ್ನೂ ಬಿಡದೆ ಕೊಳ್ಳಲು ಪ್ರಯತ್ನಿಸಿ ವಿಫಲನಾದನು
ಯೋಗ ಮಾಯಿ ಪ್ರತ್ಯಕ್ಷವಾಗಿ ಕಂಸನನ್ನು ಕೊಲ್ಲಲು ಹುಟ್ಟಾಗಿದೆ ಎಂದು ಹೇಳಿದಳು.
ಯಶೋದೆಯ ಮಡಿಲಲ್ಲಿ ಬೆಳದ ಮಗು ಶ್ರೀ ಕೃಷ್ಣನಾಗಿ ಧರ್ಮವನ್ನು ಉಳಿಸಿದನು
ಅವನ ಜನ್ಮ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುವೆವು.
- ಎಸ್ ಗೋಪಿನಾಥ್
(ChatGPT ಸಂಪರ್ಕವಿಲ್ಲದೆ ಬರೆಯಲ್ಪಟ್ಟಿದೆ)