
ಜಯ ಅಮ್ಮ
ನನ್ನ ಅಮ್ಮ ಒಬ್ಬ ಅಪೂರ್ವ ಮಹಿಳೆ
ಅವರಂತೆ ಇನ್ನೊಬ್ಬರನ್ನು ನೋಡಿರಲಾರೆ.
ನಮ್ಮ ಅಜ್ಜಿಯ ನಾಲ್ಕನೇ ಹೆಣ್ಣು ಮಗಳಾದರು
ಹುಟ್ಟುಕೂಡಲೇ ತಂದೆ ಮನೆ ಬಿಟ್ಟು ಹೋದರು.
ಅಜ್ಜಿ ನಾಲ್ಕು ಹೆಣ್ಣು ಮಕ್ಕಳೊಂದಿಗೆ ಇರಲು
ಅವರ ಅಕ್ಕ ಭಾವನ ಕೈ ಹಿಡಿದರು ಬದುಕಲು.
ಆ ಅಕ್ಕ ಭಾವ ಅಜ್ಜಿಯ ಮಕ್ಕಳನ್ನು ಬೆಳೆಸಿದರು
ಅವರ ಮದುವೆ ಬಾಣಂತನ ಮಾಡಿದರು.
ಹದಿನೆಂಟು ವಯಸ್ಸಿನಲ್ಲಿ ಅಮ್ಮನ ಮದುವೆ
ದುರದೃಷ್ಟವಶಾತ್ ಅಪ್ಪನ ಮೂರನೆಯದಂತೆ.
ಅಮ್ಮ ಹಿರಿಯರ ಮಾತಿನಂತೆ ನಡೆದರು
ಏನು ಕೊರತೆಯಿಲ್ಲ ಎಂದು ಕೊಂಡರು.
ಅಪ್ಪ ಹಣವಂತರ ಮನೆಯವರಾಗಿದ್ದರು
ಅವರು ಒಳ್ಳೆಯ ವೃತ್ತಿಯಲ್ಲಿದ್ದರು.
ನಾವು ಆರು ಜನ ಮಕ್ಕಳಾದೆವು
ಮೂರು ಗಂಡು ಮೂರು ಹೆಣ್ಣು.
ಅಪ್ಪ ಹೃದಯಘಾತದಿಂದ ತೀರಿಕೊಂಡರು
ಅಮ್ಮನಿಗೆ ಆಗ ನಲವತ್ತು ವಯಸ್ಸೆಂದರು.
ಆರು ಮಕ್ಕಳೂ ಚಿಕ್ಕ ವಯಸ್ಸಿನವರಾಗಿದ್ದರು
ಇನ್ನೂ ಶಾಲಾ ಕಾಲೇಜು ಶಿಕ್ಷಣದಲ್ಲಿದ್ದರು.
ತಂದೆಯವರು ಇಲ್ಲ
Read More! Earn More! Learn More!