ಇದು ಯಾರು ಬರೆದ ಕಥೆಯೋ

ನನಗಾಗಿ ಬಂದ ವ್ಯಥೆಯೋ

ಕೊನೆ ಹೇಗೊ ಅರಿಯಲಾರೆ

ಮರೆಯಾಗಿ ಹೋಗಲಾರೆ


ಕಾಣದಿಹ ಕೈಯೊಂದು ಸೂತ್ರ ಹಿಡಿದಿದೇ

ಕಾಣದಿಹ ಕೈಯೊಂದು ಸೂತ್ರ ಹಿಡಿದಿದೇ

ಆಡಿಸಿದೆ ಕಾಡಿಸಿದೆ ಅಳಿಸಿ ನಗುತಿದೇ

ಬರಿ ಕನಸಾಯ್ತು ಸುಖ ಶಾಂತಿಯೆಲ್ಲ

ಇನ್ನು ಬದುಕೇಕೊ ಕಾಣೆನಲ್ಲ.


ಇದು ಯಾರು ಬರೆದ ಕಥೆಯೋ


ಹೆದರಿ ಬೆದರಿ ಮೂಗನಂತೆ ಕೂಗಲಾರದೇ

ಹೆದರಿ ಬೆದರಿ ಮೂಗನಂತೆ ಕೂಗಲಾರದೇ

ಕಾಲು ಒಡೆದು ಕುಳಿತಿರುವೆ ದಾರಿ ಕಾಣದೇ

ಜೊತೆಯಾರಿಲ್ಲ ನಾ ಒಂಟಿಯಾದೆ

ನಗುವಿನ್ನೆಲ್ಲಿ ಸೋತು ಹೋದೆ.


ಇದು ಯಾರು ಬರೆದ ಕಥೆಯೋ


ಮೆಟ್ಟಲು ಏರಿ ಇಳಿಯಲು ಒಪ್ಪಿಗೆ ಸಿಕ್ಕಿಲ್ಲ

ಮೆಟ್ಟಲು ಏರಿ ಇಳಿಯಲು ಒಪ್ಪಿಗೆ ಸಿಕ್ಕಿಲ್ಲ

ನಡೆದು ಹೋಗಲು ಮೈಯಲ್ಲಿ ಶಕ್ತಿಯಿಲ್ಲ

ಕಾರು ಸ್ಕೂಟರ್ರೂ ಮುಟ್ಟೋ ಹಾಗಿಲ್ಲ

ಕಾಲ ಹೇಗೆ ಕಳೆಯಳೆಂದು ಕಾಣೆನಲ್ಲ.


ಇದು ಯಾರು ಬರೆದ ಕಥೆಯೋ

ನನಗಾಗಿ ಬಂದ ವ್ಯಥೆಯೋ

ಕೊನೆ ಹೇಗೊ ಅರಿಯಲಾರೆ

ಮರೆಯಾಗಿ ಹೋಗಲಾರೆ

ಇದು ಯಾರು ಬರೆದ ಕಥೆಯೋ.


- ಗೋಪಿನಾಥ್ S


( ಅದೇ ಶೀರ್ಷಿಕೆಯ ಹಳೆಯ ಹಾಡಿನ ಸಾಹಿತ್ಯವನ್ನು ಪುನಃ ಬರೆದಿರತಕ್ಕದ್ದು)