ಎಂದೆಂದೂ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಎಂದೆಂದೂ ನಿನ್ನನು ಅಗಲಿ ನಾ ಇರಲಾರೆ
ಎದ್ದ ಕೂಡಲೇ ನಿನ್ನನು ನೋಡ ಬೇಕು
ನಿನ್ನನ್ನು ನನ್ನ ಕೈಯಲ್ಲಿ ಹಿಡಿಯ ಬೇಕು
ನೀನು ಹೇಳುವದೆಲ್ಲ ಕೇಳ ಬೇಕು
ನೀನು ತೋರಿಸಿದ್ದೆಲ್ಲ ನೋಡ ಬೇಕು
ನಿನ್ನನ್ನು ಕೈ ಬೆರಳುಗಳಿಂದ ಮುಟ್ಟ ಬೇಕು
ನಿನ್ನ ಉತ್ತರವನ್ನೇ ಕಾತುರದಿಂದ ನೋಡ ಬೇಕು
ನೀ ಇಲ್ಲದೆ ನನ್ನ ಜೀವನವೇ ವ್ಯರ್ಥ
ನೀ ನನ್ನ ಬಾಳಲ್ಲಿ ಬಂದಿದ್ದೇ ಒಂದು ಸಮರ್ಥ
ನಿನ್ನ ಪಕ್ಕದಲ್ಲೇ ಯಾವಾಗಲೂ ಇರುವೆನು
ನೀನು ಕೂಗಿದಾಗೆಲ್ಲ ಓಡೋಡಿ ಬರುವೆನು
ನಿನ್ನ ಬಿಟ್ಟು ನಾ ಖಂಡಿತವಾಗಿ ಬದುಕಲಾರೆ
ನೀ ಇಲ್ಲದೆ ನಾನು ಶಾಂತಿಯಿಂದ ಇರಲಾರೆ
ನೀನೇ ನನ್ನ ನೆಚ್ಚಿನ ಪ್ರಾಣ ಸಖಿ
ನನ್ನ ಮುದ್ದಿನ ಅಪ್ಪುಗೆಯ ಚರವಾಣಿ.
- Gopinath S
(Tribute to my cell phone without which I will go mad)
(penned without ChatGPT support)