ಬೊಂಬೆ ಹೇಳುತೈತೆ


ಬೊಂಬೆ ಹೇಳುತೈತೆ ಬೊಂಬೆ ಹೇಳುತೈತೆ

ನಾನೆ ರಾಜಕುಮಾರ

ನಿರಂತರವಾಗಿ ನನ್ನ ಪತ್ನಿಯ ಬಳಿ

ನಾನೆ ತಾನೇ ಅವಳ ಜತೆಗಾರ.


ನನ್ನ ಮನೆಯೇ ನನಗೆ ಅರಮನೆ

ನನ್ನ ಕಾರೆ ನನ್ನ ರಥವೆಂದು ಭಾವಿಸುವೆನು

ನಾನೆ ಅದರ ಶಾಶ್ವತ ಸಾರಥಿ

Googleಮ್ಯಾಪೆ ದಾರಿ ತೋರುವ ಮಾರ್ಗದರ್ಶಿ


ನನ್ನ ಪತ್ನಿ ಮಾಡುವ ಅಡುಗೆಯೇ ಪರಮಾನ್ನ

ನನ್ನ ದೇಹಕ್ಕೆ ಈಗ ಅದೇ ಚೆನ್ನ

ಅತಿಥಿಗಳು ಬಂದರೆ ಮೃಷ್ಟಾನ್ನ

ಆಗ ಸಿಗುವುದು ಸೊಗಸಾದ ಭೋಜನ.


ನನ್ನ ಚರವಾಣಿಯೇ ನನಗೆ ದಿನದ ಆಸರೆ

ನನ್ನ ಜೀವನವೇ ವ್ಯರ್ಥ ಅದು ಕೆಟ್ಟರೆ

ಪ್ರತೀ ದಿನ ಅದನ್ನೇ ಬಳೆಸುವೆನು

ನನ್ನ ದಿನಚರಿ ಕಾಲ ಕಳೆಯುವೆನು.


ನನ್ನ ಮನೋರಂಜನೆಗೆ ಉಂಟು ದೂರದರ್ಶನ

OTTಯಲ್ಲಿ ಹಾಕುವ ಚಿತ್ರಗಳೇ ಅಪಾರ

ಹಿಂದಿ ಕನ್ನಡ ತಮಿಳು ಭಾಷೆಗಳಲ್ಲಿ ನೋಡುವೆ

ಹೊರಗೆ ಹೋಗುವ ಪ್ರಮೇಯವೇ ಇಲ್ಲವೆನುವೆ.


ನನ್ನ ಪಾಲಿಗೆ ನಾನೆ ರಾಮ ಎನಿಸಿಕೊಳ್ಳುವೆ

ನನ್ನ ಪತ್ನಿಯೇ ನನಗೆ ಸೀತೆ ಆದಳೆ

ನಮ್ಮ ಹೆಣ್ಣು ಲವಕುಶರು ಜೀವನದ ತಾರೆಯರು

ಅವರಿಲ್ಲದೆ ನಾವೇನು ಮಾಡುವೆವು.


ಜೀವನ ಶೈಲಿಯಲ್ಲಿ ಬದಲಾವಣೆ ಉಂಟಾಗಿವೆ

ಆದರೆ ನಾನು ಹಿಂದಿನಂತೆಯೇ ಇರುವೆ

ನಮ್ಮ ಜನ್ಮ ಹೀಗೆಯೇ ಸಾರ್ಥಕವಾಗುತ್ತೆ

ಬೊಂಬೆ ಹೇಳುತೈತೆ ಬೊಂಬೆ ಹೇಳುತೈತೆ.


- ಗೋಪಿನಾಥ್ S


(ChatGPT ಸಂಪರ್ಕವಿಲ್ಲದೆ ಬರೆಯಲ್ಪಟ್ಟಿದೆ)

(ವ್ಯಾಕರಣದಲ್ಲಿ ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಿ)