ಭಾಗ್ಯದ ಲಕ್ಷ್ಮೀ ಸಾಕಮ್ಮ
ಭಾಗ್ಯದ ಲಕ್ಷ್ಮಿ ಸಾಕಮ್ಮ
ನಮ್ಮಮ್ಮ ನೀನು
ಭಾಗ್ಯದ ಲಕ್ಷ್ಮಿ ಸಾಕಮ್ಮ .
ದಿನ ನಿತ್ಯ ನಿನ್ನನ್ನೇ ನೆನೆಸಿ ಕೊಳ್ಳುವೆನು
ಪ್ರತೀ ಶುಕ್ರವಾರ ಹೂವು ಹಣ್ಣು ಅರ್ಪಿಸುವೆನು.
ನೀನಿಲ್ಲದೆ ನನ್ನ ಬಾಳೇ ಬರಿದಾಗುವುದು
ನನ್ನ ದೇಹ ಬಲಹೀನವಾಗುವುದು.
ಸಮಯಕ್ಕೆ ಅನುಗುಣವಾಗಿ ಕೆಲಸ ಕೊಡಿಸಿದೆ
ಶಾಶ್ವತವಾಗಿ ವಾಸಕ್ಕೆ ಮನೆ ಕಟ್ಟಿಸಿ ಕೊಟ್ಟೆ.
ನನಗೆ ತಕ್ಕ ಪತ್ನಿಯನ್ನು ಕೊಟ್ಟಿರುವೆ
ಮಕ್ಕಳನ್ನೂ ಸಂತೋಷದಿಂದಿರಿಸಿರುವೆ.
ನನ್ನ ಸಂಸಾರದಲ್ಲಿ ಮುಖ್ಯ ಪಾತ್ರ ನಿನ್ನದೆನುವೆನು
ನೀನೇ ಕೊಟ್ಟಿರುವೆ ಮನಶ್ಶಾಂತಿ ಎನ್ನುವೆನು.
ನಿತ್ಯ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ತಂದಿರುವೆ
ಹೀಗೆ ಇರಲಿ ನಮ್ಮ ಕೊನೆಯ ದಿನಗಳು ತನಕ ಎನ್ನುವೆ.
ಈ ಏಪ್ಪತ್ತು ವರುಶಗಳಲ್ಲಿ ಎಲ್ಲ ಸುಖಗಳನ್ನು ಅನುಭವಿಸಿರುವೆನು
ಇನ್ನೇನು ಕೇಳಿಕೊಳ್ಳಲಿ ನಿನ್ನಲ್ಲಿ ಎಂದು ಯೋಚಿಸಿತ್ತಿರುವೆನು.
- ಗೋಪಿನಾಥ್ S
(ChatGPT ಸಂಪರ್ಕವಿಲ್ಲದೆ ಬರೆಯಲ್ಪಟ್ಟಿದೆ)