ಅನಿಸುತಿದೆ ಯಾಕೋ ಇಂದು

ಕಾಲ ಬದಲಾಗಿದೆ ಎಂದು


ಮಕ್ಕಳು ಬೆಳದು ಮದುವೆ ಮಾಡಿಕೊಂಡರು

ಅವರ ಸಂಸಾರ ನೌಕೆಯಲ್ಲಿ ಮಘ್ನರಾದರು


ನಿಮಗೆ ವಯಸ್ಸಾಗಿದ್ದರೇನು ಈಗ

ಮನಸ್ಸಿಲ್ಲವೇ ತೋರಲು ಮಾರ್ಗ


ಜೀವನದಲ್ಲಿ ಖಿನ್ನತೆ ಹತಾಶೆ ಇದೆಯೇನು

ಒಂದೆರಡು ಆಸಕ್ತಿ ಬೆಳಸಿ ಕೊಳ್ಳುವಿರೇನು


ನೋವು ಇದೆ ಎಂದು ಚಿಂತಿಸ ಬೇಡಿ

ಸ್ವಲ್ಪ ಕಾಲದಲ್ಲಿ ಅದು ಮಾಯ ನೋಡಿ


ಇಲ್ಲಿಯವರೆಗೂ ಜೀವ ಕೊಟ್ಟ ದೇವರಿಗೆ

ದಿನ ನಿತ್ಯ ನಮನ ತೋರಿ ಕೇಳಿ ಬೇಡಿಕೆ


ಊಟ ತಿಂಡಿ ಮಾಡುವ ಮುನ್ನ

ಸ್ವಲ್ಪ ವ್ಯಾಯಾಮ ಮಾಡಿದರೆ ಚೆನ್ನ


ಕಥೆ ಪುಸ್ತಕ ಹಿಡಿದು ಓದಿ ನೋಡಿ

ಅದರಿಂದ ಆಗುವ ಸಮಾಧಾನವೇ ಮೋಡಿ


ಸಂಗೀತದಲ್ಲಿ ಸ್ವಲ್ಪ ರುಚಿ ಇದೆ ಎಂದಿರಾ

ಹಾಡು ಹೇಳಿ ಇಲ್ಲ ಕೇಳಿ ನಲಿಯುವಿರಾ


ಬಂಧು ಬಳಗದವರೊಂದಿಗೆ ಸಂಪರ್ಕ ಬೆಳಸಿರಿ

ನಗುತ ಮಾತನಾಡಿ ಸಮಯ ಕಳೆಯಿರಿ


ಇಷ್ಟು ದಿನ ಜೀವನದ ಅನುಭವ ಪಡೆದಿರಿ

ಇನ್ನು ಏಕೆ ಚಿಂತೆಯಲ್ಲಿ ಮುಳಿಗಿದಿರಿ


ನೀವು ಚಿಕ್ಕವರಾಗಿದ್ದಾಗ ಇದ್ದ ಹಾಗೆ ಇರಲೆಂದು

ಬಯಸುವುದು ಈ ಕಾಲದಲ್ಲಿ ಅಸಾಧ್ಯವೆಂದು


ಬಹಳ ಮಟ್ಟಿಗೆ ಬದಲಾವಣೆ ಆಗಿರುವುದಿಂದ

ಹಾಗೆ ನೆನಸುವ ಕಲ್ಪನೆ ತಪ್ಪು ಎನ್ನುವೆನೆಂದ


ಕಾಲ ಬದಲಾದ ಹಾಗೆ ನಾವು ಬದಲಾಗ ಬೇಕು

ಅದೇ ಜೀವನದ ವೈಶಿಷ್ಟವೆಂದು ತಿಳಿಯಬೇಕು.